ಮಂಗಳೂರು: ಏ.29ರಂದು ತೆರೆಕಾಣಲಿರುವ ಬಹುನಿರೀಕ್ಷಿತ ‘ ಮಗನೇ ಮಹಿಷ’ ತುಳು ಸಿನಿಮಾದ 3ನೇ ಹಾಡು ಇಂದು ಬಿಡುಗಡೆಯಾಗಿದೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ರಚನೆಯ ‘ ಕನನಾ ನಿಜಾನಾ’ ಹಾಡು ಬಿಡುಗಡೆಯಾಗಿದ್ದು ಮೆಚ್ಚುಗೆ ಪಡೆಯುತ್ತಿದೆ. ಪ್ರಶಾಂತ್ ಕಂಕನಾಡಿ ಹಾಗೂ ಆಕಾಂಕ್ಷಾ ಬಾದಾಮಿ ಈ ಹಾಡಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.ತುಳು ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಹಾಡಿನಲ್ಲಿ 100 ಕಲಾವಿದರು ಅಭಿನಯಿಸಿರುವುದು ಈ ಹಾಡಿನ ವಿಶೇಷ.
ಇದು ಪಾರ್ಟಿ ಸಾಂಗ್ ಆಗಿದ್ದು, ಈಗಾಗಲೇ ಮಗನೇ ಮಹಿಷ ಸಿನಿಮಾದ ಟೈಟಲ್ ಸಾಂಗ್ ಮತ್ತು ಅನುರಾಧ ಭಟ್ ಹಾಡಿರುವ ವೀರೇಂದ್ರ ಶೆಟ್ಟಿ ಸಾಹಿತ್ಯದ ‘ಚಂದನ ಸಿರಿ ನಡು ನಂದನೊಡು’ ಕ್ಲಾಸಿಕಲ್ ಸಾಂಗ್ ರಿಲೀಸ್ ಆಗಿದೆ. ಮಗನೇ ಸಿನಿಮಾದ ಹಾಡುಗಳು ವೀರು ಟಾಕೀಸ್ (veeru talkies) ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ವೀರೇಂದ್ರ ಶೆಟ್ಟಿ ನಿರ್ದೇಶನದ ಮಗನೇ ಮಹಿಷ ಸಿನಿಮಾಕ್ಕೆ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ನಿರ್ದೇಶನವಿದೆ. ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು , ನವೀನ್ ಡಿ ಪಡೀಲ್, ಶಿವಧ್ವಜ್, ಜ್ಯೋತಿ ರೈ ಸೇರಿದಂತೆ ಹೆಸರಾಂತ ಕಲಾವಿದರು ತಾರಾಗಣದಲ್ಲಿದ್ದಾರೆ.