ವಾಣಿಜ್ಯ ಜಾಹಿರಾತು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸರಣಿ ಮುಂದುವರಿದಿದ್ದು, ಇಂದು ಮತ್ತೆ ಕೊರೊನಾ ಸೋಂಕು ದೃಢಪಟ್ಟ ಇಬ್ಬರು ಸಾವನ್ನಪ್ಪಿದ್ದಾರೆ. ಭಟ್ಕಳ ಮೂಲದ 31ವರ್ಷದ ಯುವಕ ಮತ್ತು ಮಂಗಳೂರಿನ ಬೆಂಗ್ರೆ ನಿವಾಸಿ 78 ವರ್ಷದ
ವೃದ್ಧ ಸಾವನ್ನಪ್ಪಿದವರು. ಈ ಪೈಕಿ ಭಟ್ಕಳ ಮೂಲದ ಯುವಕ ಅಧಿಕರಕ್ತದೊತ್ತಡದಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಸಾವನ್ನಪ್ಪಿರುವ ವೃದ್ಧ ಡಯಾಬಿಟಿಸ್ ಮತ್ತು ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರಿಬ್ಬರ ಮರಣಾನಂತರ ಕೊರೊನಾ ವರದಿ ಲಭಿಸಿದ್ದು ಅದರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿನಿಂದ ಈವರೆಗೆ ಸಾವಿಗೀಡಾಗಿರುವವರ ಸಂಖ್ಯೆ 16 ಕ್ಕೇರಿದೆ.
ವಾಣಿಜ್ಯ ಜಾಹಿರಾತು