ಮೂಲ್ಕಿ: ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಪಂಪಿನ ಬಳಿ ಸಂಭವಿಸಿದೆ.
ಮಧ್ಯ ಪ್ರದೇಶದ ಬಬುಲು (23) ಅಚಲ್ ಸಿಂಗ್ (30) ಮೃತ ದುರ್ದೈವಿಗಳು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೇರಳ ನಿವಾಸಿ ಅನಿಶ್ (42) ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾರಿಯಲ್ಲಿ ಮೃತ ಬಬುಲ್, ಅಚಲ್ ಸಿಂಗ್ ಹಾಗೂ ಗಾಯಗೊಂಡ ಅನಿಶ್ ಮಧ್ಯಪ್ರದೇಶದ ಇಂದೋರ್ನಿಂದ ಕೇರಳಕ್ಕೆ ಪಡುಪಣಂಬೂರು ಹೆದ್ದಾರಿಯಾಗಿ ಸಾಗುತ್ತಿದ್ದರು. ಈ ವೇಳೆ ಲಾರಿ ಪಂಕ್ಚರ್ ಆದ ಕಾರಣಕ್ಕೆ ಕಾರು ನಿಂತಿದೆ.
ಕಾರು ರಿಪೇರಿ ಮಾಟಲು ಲಾರಿಯಲ್ಲಿದ್ದ ಮೂವರು ಸೇರಿ ಕೆಳಗೆ ಇಳಿದಿದ್ದರು. ಲಾರಿಯ ಟಯರ್ ಬದಲಿಸುವಾಗ ಉಡುಪಿ ಕಡೆಯಿಂದ ಏಕಾಏಕಿ ಬಂದ ಕಾರು ಒಂದು ಮೂವರಿಗೂ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಬುಲು ಹಾಗೂ ಅಚಲ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದು, ಅನಿಶ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅನಿಶ್ ರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಡಿಕ್ಕಿ ಹೊಡೆದ ಕಾರು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.