ವಾಣಿಜ್ಯ ಜಾಹಿರಾತು
ಸುಳ್ಯ: ಕಾಲು ಜಾರಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಪಯಸ್ವಿನಿ ನದಿಯಲ್ಲಿ ನಡೆದಿದೆ.
ಜಿತೇಶ್ ಹಾಗೂ ಪ್ರವೀಣ್ ಮೃತ ದುರ್ದೈವಿಗಳು.
ಪುತ್ತೂರಿನ ಕೌಡಿಚ್ಚಾರು ಸುತ್ತಮುತ್ತಲಿನ ಆರು ಮಂದಿ ಯುವಕರು ಸುಳ್ಯದ ಪಯಸ್ವಿನಿ ನದಿಗೆ ಈಜಲು ತೆರಳಿದ್ದಾಳೆ. ಈ ವೇಳೆ ಜಿತೇಶ್ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನನ್ನು ರಕ್ಷಿಸಲು ಸ್ನೇಹಿತ ಪ್ರಣೀಣ್ ಮುಂದಾಗಿದ್ದಾನೆ. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸಂತೋಷ್ ಅಂಬಟೆಮೂಲೆ, ಸತ್ಯಾನಂದ ಚಂದುಕೂಡ್ಲು, ಯುವರಾಜ ಅಂಬಟೆಮೂಲೆ, ನಿತೀಶ್ ಬಳ್ಳಿ ಕಾನ, ಜಿತೇಶ್ ಮತ್ತು ಪ್ರವೀಣ್ ಜತೆಯಾಗಿ ಸುಳ್ಯಕ್ಕೆ ಆಗಮಿಸಿದ್ದರು. ಸುಳ್ಯದ ಓಡಬಾಯಿ ಬಳಿ ತೂಗುಸೇತುವೆ ಸಮೀಪ ಕಾರನ್ನು ನಿಲ್ಲಿಸಿ ಸೇತುವೆಯಲ್ಲಿ ನಡೆದು ದೊಡ್ಡೇರಿಗೆ ಹೋಗಿ ಬಳಿಕ ಪಯಸ್ವಿನಿ ನದಿ ಇಳಿದರು. ಈ ವೇಳೆ ದುರ್ಘಟನೆ ನಡೆದಿದ್ದು, ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಣಿಜ್ಯ ಜಾಹಿರಾತು