ವಾಣಿಜ್ಯ ಜಾಹಿರಾತು

ಉಡುಪಿ: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಇಡೀ ಮನೆಯೇ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಟಪಾಡಿಯ ಮಟ್ಟು ದುಗ್ಗುಪಾಡಿಯಲ್ಲಿ ಎಂಬಲ್ಲಿ ನಡೆದಿದೆ.

ವನಜ ಎನ್‌.ಕೆ ಎಂಬವವರಿಗೆ ಸೇರಿದ ಮನೆ ಸಂಪುರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಬುಧವಾರ ರಾತ್ರಿ ಇದ್ದಕ್ಕಿದ್ದ ಹಾಗೆ ವನಜ ಅವರ ಮನೆ ಹಾಗೂ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆ ಹಾಗೂ ದನದ ಕೊಟ್ಟಿಗೆಗೆ ಬೆಂಕಿ ತಗುಲಿದೆ.  ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದರಿಂದ ಹೆಚ್ಚಿನ ಅವಘಡ ತಪ್ಪಿದಂತಾಗಿದೆ.

ಮನೆ ರಿಪೇರಿ ಮಾಡಲು ಹಾಗೂ ದೈವದ ಮನೆ ಕಟ್ಟಲು ತಂದು ಇರಿಸಲಾಗಿದ್ದ ಮರದ ದಾರಂದಗಳು, ಕಿಟಕಿಗಳು, ಬೈಹುಲ್ಲು ಹಾಗೂ ವಿದ್ಯುತ್‌ ಸಂಪರ್ಕ, ಸಲಕರಣೆಗಳೂ ಅಗ್ನಿಗೆ ಆಹುತಿಯಾಗಿದೆ. ಅಗ್ನಿ ಅವಘಡದಿಂದ ಸುಮಾರು 3 ಲಕ್ಷ ರೂ. ಗೂ ಅಧಿಕ ಹಾನಿ ಸಂಭವಿಸಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.