ಉಡುಪಿ: ಮಾನಸಿಕವಾಗಿ ನೊಂದಿದ್ದ ವ್ಯಕ್ತಿಯೋರ್ವರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.
ಕೆಮ್ಮಣ್ಣು ನಿವಾಸಿ ಪ್ರವೀಣ್ ಬೆಲ್ಚಡ(36) ನಾಪತ್ತೆಯಾದವರು.
ವಿವಾಹಿತನಾಗಿರುವ ಪ್ರವೀಣ್ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇವರಿಗೆ 5 ವರ್ಷದ ಹೆಣ್ಣುಮಗಳಿದ್ದು, ಪತ್ನಿ ಹಾಗೂ ಮಗುವಿನಿಂದ ದೂರವಾಗಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಪ್ರವೀಣ್ ಅ.18ರ ರಾತ್ರಿಯಿಂದ ತನ್ನ ಗಾಡಿ ಸಮೇತ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅ.18ರ ರಾತ್ರಿ ಪ್ರವೀಣ್ ಸಹೋದರಿ ತನ್ನ ಮನೆಗೆ ಬರುವಂತೆ ಕರೆದಿದ್ದು, ಬೆಳಿಗ್ಗೆ ಬರುವುದಾಗಿ ತಿಳಿಸಿದ್ದರು. ಆದರೆ ಬೆಳಿಗ್ಗೆ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆದ ಕಾರಣ ಮನೆಗೆ ಬಂದು ನೋಡಿದಾಗ ಅಲ್ಲಿ ಇರದೇ ಇರುವುದು ಗಮನಕ್ಕೆ ಬಂದಿದೆ. ಅಲ್ಲದೇ ಮನೆಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಪ್ರವೀಣ್ ಅವರ ಸಹೋದರ ಮಲ್ಪೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಇವರ ಬಗ್ಗೆ ಮಾಹಿತಿ ದೊರಕಿದಲ್ಲಿ 9900797897,9164444199 ಸಂಪರ್ಕಿಸುವಂತೆ ಕೋರಿದ್ದಾರೆ.