ವಾಣಿಜ್ಯ ಜಾಹಿರಾತು
ಬಂಟ್ವಾಳ: ವೀರಾಂಜನೇಯ ಸೇವಾ ಸಮಿತಿಯು ತನ್ನ 48ನೇ ಸೇವಾ ಯೋಜನೆಯ ನೆರವನ್ನು ಕ್ಯಾನ್ಸರ್ ಪೀಡಿತರೋರ್ವರಿಗೆ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಓಡಿಳ್ನಾಳ ಗ್ರಾಮದ ಸುಪ್ರೀತ್ ಎಂಬವರು ಎಲುಬಿನ ಕ್ಯಾನ್ಸರ್ ಸಮಸ್ಯೆಯಿಂದ ಬಳತ್ತಿದ್ದರು. ಇವರ ಚಿಕಿತ್ಸೆಗೆ ಸುಮಾರು 13 ಲಕ್ಷದಷ್ಟು ಹಣ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಮುಂದಿನ ಚಿಕಿತ್ಸೆಗೆ ಅಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಆ ಬಡಕುಟುಂಬಕ್ಕೆ ಸಾಧ್ಯವಿರಲಿಲ್ಲ.ಈ ಬಡಕುಟುಂಬದ ಕಷ್ಟವನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 15,000 ರೂ. ಸಹಾಯಧನದ ಚೆಕ್ಕನ್ನು ತಂಡದ ಸದಸ್ಯರ ಸಮ್ಮುಖದಲ್ಲಿ ಸುಪ್ರೀತ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ವಿದ್ಯಾದಾನ ಹಾಗೂ ಬಡವರ ಸೇವೆಯೇ ನಮ್ಮ ಧ್ಯೇಯ ಎಂಬ ಪರಿಕಲ್ಪನೆಯೊಂದಿಗೆ 5ವರ್ಷ 1ತಿಂಗಳ ಪಯಣದ ಸಾರ್ಥಕತೆಯೊಂದಿಗೆ ಈವರೆಗೆ ಸುಮಾರು 52 ಅಶಕ್ತ ಬಡಕುಟುಂಬಗಳಿಗೆ ಸಹಾಯಹಸ್ತನೀಡಿ ವೀರಾಂಜನೇಯ ಸೇವಾ ಸಮಿತಿ ಸ್ಪೂರ್ತಿಯಾಗಿದೆ.
- ಸಹಾಯ ಸಣ್ಣಮಟ್ಟದ್ದಾಗಿರಲೀ, ದೊಡ್ಡದಾಗಿರಲೀ, ಸಹಾಯ ಸಹಾಯವೇ. ಯಾವುದೇ ಫಲಾಪೇಕ್ಷೆ ಇಲ್ಲದೇ, ನಿಸ್ವಾರ್ಥ ಮನಸ್ಸಿನಿಂದ ಮತ್ತೊಬ್ಬರಿಗೆ ಸಹಾಯಮಾಡುವ ಅದೆಷ್ಟು ಮಾನವೀಯಮುಖಗಳು ನಮ್ಮ ನಡುವೆ ಇದ್ದಾರೆ ಎನ್ನುವುದೇ ಹೆಮ್ಮೆ. ಇನ್ನೊಬ್ಬರ ಕಷ್ಟಕ್ಕೆ, ನೋವಿಗೆ ಸ್ಪಂದಿಸುವುದು ಸಹೃದಯಿಗಳಿಂದಷ್ಟೇ ಸಾಧ್ಯ. ಅಂತಹ ಸಹೃದಯಿಗಳು ತಾವಾಗಿದ್ದರೇ ಅಥವಾ ನಿಮಗೆ ತಿಳಿದಿದ್ದರೇ ಅಂಥವರನ್ನು ಪರಿಚಯಿಸುವುದು ನಮ್ಮ ಹೆಮ್ಮೆ. ‘ಸಹಾಯಹಸ್ತ’ ಎನ್ನುವ ಶೀರ್ಷಿಕೆಯಡಿ ನಾವು, ನೆರವಾದವರು ಹಾಗೂ ನೆರವು ಯಾಚಿಸುವವರಿಗೆ ಸಂಬಂಧಿಸಿ ವರದಿ ಪ್ರಕಟಿಸುತ್ತೇವೆ. ಇದರಿಂದ ನಿಮ್ಮ ಕಾರ್ಯಕ್ಕೆ ಶ್ಲಾಘನೆ, ನೆರವು ನೀಡಲು ಪ್ರೇರಣೆ ಜೊತೆಗೆ ಅಗತ್ಯವುಳ್ಳವರಿಗೆ ನೆರವು ಸಿಗಬಹುದೆಂಬ ನಿರೀಕ್ಷೆ ನಮ್ಮದು. ಒಂದು ಮಾತು, ನೀವು ಸಹಾಯಮಾಡುತ್ತಿರುವ ಭಾವಚಿತ್ರವನ್ನು ನಾವಿಲ್ಲಿ ಪ್ರಕಟಿಸುವುದಿಲ್ಲ. ನಿಮ್ಮ/ಸಂಘಟನೆ ಹೆಸರು ಪ್ರಕಟಿಸುತ್ತೇವೆ. ನೀವು ಬಯಸಿದ್ದಲ್ಲಿ ನಿಮ್ಮ/ ಸಂಘಟನೆ ಸದಸ್ಯರ ಭಾವಚಿತ್ರ ಮಾತ್ರ ಪ್ರಕಟಿಸುತ್ತೇವೆ. ಇನ್ನು ಸಹಾಯದ ನಿರೀಕ್ಷೆಯಲ್ಲಿರುವವರು ನೀವಾಗಿದ್ದರೇ, ನಿಮ್ಮ ಅನುಮತಿ ಇದ್ದಲ್ಲಿ ಮಾತ್ರ ಭಾವಚಿತ್ರ ಪ್ರಕಟಿಸುತ್ತೇವೆ.
ವಿವರಗಳನ್ನು ನಮ್ಮ ಸಂಖ್ಯೆ 6363376133 , 9019944921 ವಾಟ್ಸ್ಸ್ಯಾಪ್ ಮಾಡಿ. ಅಥವಾ [email protected] ಇ-ಮೈಲ್ ಮಾಡಿ.
ವಾಣಿಜ್ಯ ಜಾಹಿರಾತು