ನವದೆಹಲಿ: ಭಾರತದ ರಕ್ಷಣಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಸಾವಿಗೆ ಕಾರಣವಾಗಿರುವ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಬಳಿ ಅಪಘಾತಕ್ಕೀಡಾಗುವ ಕೆಲವೇ ಕ್ಷಣಗಳ ಮೊದಲು ಹಾರಾಡುತ್ತಿದ್ದ ವೀಡಿಯೋವೊಂದು ವೈರಲ್ ಆಗಿದೆ.
ವೀಡಿಯೋದಲ್ಲಿ ಚಾಪರ್ ಬೆಟ್ಟದ ಮೇಲೆ ಹಾರಾಡುತ್ತಿರುವುದನ್ನು ನೋಡಬಹುದಾಗಿದೆ. ಸ್ಥಳೀಯರು ಈ ವೀಡಿಯೋವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.
#WATCH | Final moments of Mi-17 chopper carrying CDS Bipin Rawat and 13 others before it crashed near Coonoor, Tamil Nadu yesterday
(Video Source: Locals present near accident spot) pic.twitter.com/jzdf0lGU5L
— ANI (@ANI) December 9, 2021
ಹಲವು ಯುವಕ ಯುವತಿಯರು ಈ ವಿಡಿಯೋದಲ್ಲಿ ಕಾಣಿಸಿದ್ದು, ವಿಡಿಯೋದಲ್ಲಿ ಚಾಪರ್ ಬೆಟ್ಟಗಳ ಮೇಲೆ ಹಾರುತ್ತಿರುವುದನ್ನು ಕಾಣಬಹುದು. ನಂತರ ಎಲ್ಲರೂ ಆ ದಿಕ್ಕಿನಲ್ಲಿ ನೋಡಿದಾಗ ಚಾಪರ್ ಕಾಣಿಸುವುದಿಲ್ಲ. ‘ಏನಾಯಿತು? ಅದು ಬಿದ್ದಿದೆಯೇ ಅಥವಾ ಕ್ರ್ಯಾಶ್ ಆಗಿದೆಯೇ?’ ಎಂದು ಒಬ್ಬ ವ್ಯಕ್ತಿಯು ಕೇಳುವುದು ವಿಡಿಯೋದಲ್ಲಿ ಕೇಳಿಸುತ್ತದೆ, ಇದಕ್ಕೆ ಪ್ರತಿಯಾಗಿ ಇನ್ನೊಬ್ಬರು ಹೌದು ಎಂದು ಉತ್ತರಿಸುತ್ತಾರೆ.
ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಏರ್ ಫೋರ್ಸ್ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಮಿಳುನಾಡಿನ ಕೂನೂರಿನಲ್ಲಿ ವಾಯುಸೇನೆಯ ಎಂ-17ವಿ5 ಹೆಲಿಕಾಪ್ಟರ್ ನಿನ್ನೆ ಅಪಘಾತಕ್ಕೀಡಾಗಿದ್ದು, ದೇಶದ ಮೊಟ್ಟ ಮೊದಲ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರವನ್ನು ಇಂದು ಸಂಜೆಯ ವೇಳೆಗೆ ಸೇನಾ ವಿಮಾನದಲ್ಲಿ ನವದೆಹಲಿಗೆ ಕರೆತರುವ ಸಾಧ್ಯತೆಯಿದೆ.ಅಂತ್ಯಕ್ರಿಯೆ ನಾಳೆ ದೆಹಲಿಯ ಕಂಟೋನ್ಮೇಂಟ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ನಾಳೆ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್ ಜನರಲ್ ರಾವತ್ ಹಾಗೂ ಪತ್ನಿ ಮಧುಲಿಕಾ ಅಂತ್ಯಕ್ರಿಯೆ