ಕಾಲ ಬದಲಾದಂತೆ ಟ್ರೆಂಡ್ ಗಳು ಬದಲಾಗುತ್ತವೆ. ಫ್ಯಾಷನ್ ಹೆಸರಲ್ಲಿ ಜನರು ಸಂಸ್ಕೃತಿಯನ್ನು ಮರೆತು ಹೊಸತನ್ನು ಅಡಾಪ್ಟ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಅದೇ ಸಾಲಿಗೆ ಕಾಲ್ಗೆಜ್ಜೆ, ಬಳೆ, ಮೂಗುತ್ತಿ, ಬಿಂದಿ ಮುಂತಾದವುಗಳು ಸೇರುತ್ತವೆ. ಸೀರೆ, ಸಲ್ವಾರ್ ಗಿಂತ ಜೀನ್ಸ್ ಶಾರ್ಟ್ಸ್ ಗಳೇ ಫೇವರಿಟ್ ಅನ್ನೋ ನ್ಯೂ ಜನರೇಷನ್ ಕಾಲ್ಗೆಜ್ಜೆ ಬಳಸೋದನ್ನೇ ಮರೆತುಬಿಟ್ಟಿದೆ. ಆದರೆ ನಿಮಗೆ ಗೊತ್ತಾ ಅದೆಷ್ಟು ವರುಷಗಳು ಕಳೆದರೂ ಕಾಲ್ಗೆಜ್ಜೆ ಔಟ್ ಆಫ್ ಫ್ಯಾಷನ್ ಅಲ್ಲ.
ಹಿಂದಿನ ಕಾಲದಲ್ಲಿ ಮಹಿಳೆಯರು ಮತ್ತು ಮಕ್ಕಳು ಕಾಲಿಗೆ ಗೆಜ್ಜೆ ಹಾಕೋದು ಒಂದು ಸಂಪ್ರದಾಯವಾಗಿತ್ತು. ಇಂಥಹಾ ಮನೆಯಲ್ಲಿ ಲಕ್ಷ್ಮಿ ದೇವಿಯ ಸ್ಥಿರ ನಿವಾಸ ಇರುತ್ತದೆ ಎಂಬ ನಂಬಿಕೆಯಿತ್ತು. ಕಾಲಿಗೆ ಬೆಳ್ಳಿ ಗೆಜ್ಜೆ ಹಾಕುವುದರಿಂದ ಆರೋಗ್ಯವನ್ನು ಸಹ ವೃದ್ಧಿಸಿಕೊಳ್ಳಬಹುದು ಎಂದೇ ಹೇಳಲಾಗುತ್ತಿತ್ತು.
ಮೊದಲನೆಯದಾಗಿ ಬೆಳ್ಳಿಯ ಕಾಲ್ಗೆಜ್ಜೆಯನ್ನು ಹಾಕುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಬೆಳ್ಳಿ ಲೋಹ ವಿಶೇಷವಾದದ್ದು ಮತ್ತು ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಇದು ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿರಿಸಿ ರಕ್ತ ಪರಿಚಲನೆ ಸುಲಭವಾಗಿಸುತ್ತದೆ. ಕಾಲಿನ ನರಸಂಬಂಧಿ ಸಮಸ್ಯೆಯೂ ಗೆಜ್ಜೆ ಧರಿಸುವುದರಿಂದ ಕಡಿಮೆಯಾಗುತ್ತದೆ ಎಂದೇ ಹೇಳಲಾಗಿತ್ತು. ಅಲ್ಲದೆ, ಹೆಣ್ಣು ಮಕ್ಕಳಲ್ಲಿ ಕಾಡುವ ಋತುಸ್ರಾವದಲ್ಲಿ ಉಂಟಾಗುವ ಕಾಲು ಸೆಳೆತವನ್ನು ಕೂಡಾ ಇದು ನಿವಾರಿಸುತ್ತದೆ. ಕೇರಳದಲ್ಲಿ ಹೆಣ್ಣುಮಕ್ಕಳು ಕಾಲಿಗೆ ಚಿನ್ನದ ಗೆಜ್ಜೆಯನ್ನು ಸಹ ಧರಿಸುವ ಸಂಪ್ರದಾಯವಿದೆ.
ಟ್ರೆಂಡೀ ಕಾಲ್ಗೆಜ್ಜೆ ಲೇಟೆಸ್ಟ್ ಫ್ಯಾಷನ್
old is gold ಎಂಬಂತೆ ಔಟ್ ಆಫ್ ಫ್ಯಾಷನ್ ಎಂದೇ ಪರಿಗಣಿಸಿದ್ದ ಕಾಲ್ಗೆಜ್ಜೆ ಮತ್ತೆ ಟ್ರೆಂಡ್ ನಲ್ಲಿದೆ. ಜೀನ್ಸ್, ಕುರ್ತಾ, ಸ್ಕರ್ಟ್ ಯಾವುದೇ ಇರಲಿ ಈ ಲೇಟೆಸ್ಟ್ ಕಾಲ್ಗೆಜ್ಜೆ ಧರಿಸಲು ಹುಡುಗಿಯರು ಇಷ್ಟಪಡುತ್ತಿದ್ದಾರೆ. ಕಲರ್ ಫುಲ್ ಬೀಡ್ಸ್, ಅನೇಕ ಲೋಹಗಳಿಂದ ಮಾಡಿದ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.
ಸಿಂಪಲ್ ಆಗಿರುವ ತೆಳುವಾದ, ಪುಟ್ಟದಾದ ಪೆಂಡೆಂಟ್ ಇರುವ ಕಾಲ್ಗೆಜ್ಜೆಗಳನ್ನು ಹೆಣ್ಣುಮಕ್ಕಳು ಬಳಸುತ್ತಿದ್ದಾರೆ. Highheels ಧರಿಸುವಾಗ ಗೋಲ್ಡನ್ ಕಲರ್ anklet ಸಹ ಹೆಚ್ಚು ಬಳಕೆಯಲ್ಲಿದೆ. ಕೇವಲ ಒಂದು ಕಾಲಿಗಷ್ಟೇ ಇಂಥಹಾ ankletಗಳನ್ನು ಬಳಸುತ್ತಾರೆ.
ಅಲ್ಲದೆ ಕಲರ್ ಫುಲ್ ಥ್ರೆಡ್ ನಲ್ಲಿ ಪೋಣಿಸಿದ ಮಣಿಗಳಿಂದ ತಯಾರಿಸಿರುವ anklet ಗಳನ್ನು ಸಹ ಬಳಸಲಾಗುತ್ತಿದೆ. ಪರ್ಲ್ಸ್ ಪೋಣಿಸಿದ ಕಾಲ್ಗೆಜ್ಜೆ ಕಾಲಿಗೆ ಹೆಚ್ಚು ಒಪ್ಪುತ್ತದೆ. ಅದೇನೆ ಇರಲಿ, ಫ್ಯಾಷನ್ ಹೆಸರಲ್ಲಿ ಮರೆಯಾಗುತ್ತಿರುವ ಸಂಸ್ಕೃತಿ ಮತ್ತೆ ಮರುಕಳಿಸುತ್ತಿರುವುದು ಖುಷಿಯ ವಿಚಾರ.