5800 ಚ.ಕಿ.ಮೀ. ವಿಸ್ತೀರ್ಣವಿರುವ ಎ68 ಮಂಜುಗಡ್ಡೆ ವಿಶ್ವದ ಅತೀದೊಡ್ಡ ಮಂಜುಗಡ್ಡೆ ಎನಿಸಿದೆ. ಅಂಟಾರ್ಟಿಕಾದ ಲಾರ್ಸೆನ್ ಸಿ ಐಸ್‍ಶೆಲ್ಫ್ ನಿಂದ ಬೇರ್ಪಟ್ಟ ಈ ಮಂಜುಗಡ್ಡೆ ಒಂದು ಟ್ರಿಲಿಯನ್ ಟನ್ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.
11,000 ಚ.ಕಿ.ಮೀ ವಿಸ್ತೀರ್ಣವಿದ್ದ ಬಿ-15 ಅತಿದೊಡ್ಡ ಮಂಜುಗಡ್ಡೆಯಾಗಿತ್ತು, ಕೆಲ ವರ್ಷಗಳ ಹಿಂದೆ ಈ ಮಂಜುಗಡ್ಡೆ ಒಡೆದು ಶೇ.12 ಗಾತ್ರ ಕಡಿಮೆಯಾಯಿತು. ಅಂಟಾರ್ಟಿಕ್ ಪರ್ಯಾಯ ದ್ವೀಪದಿಂದ ಒಡೆಯುವ ಅನೇಕ ಮಂಜುಗಡ್ಡೆಗಳು ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್‍ವಿಚ್ ದ್ವೀಪಗಳನ್ನು ತಲುಪುತ್ತವೆ ಎಂದು ಐತಿಹಾಸಿಕ ಮಾಹಿತಿ ಹೇಳುತ್ತದೆ.
2017ರಲ್ಲಿ ಅಂಟಾರ್ಟಿಕಾದ ಮಂಜುಗಡ್ಡೆ ಗೋಡೆಯನ್ನು ಒಡೆದು ಹಾಕಿದ್ದ ವಿಶ್ವದ ಅತಿದೊಡ್ಡ ಮಂಜುಗಡ್ಡೆ ಈಗ ದಕ್ಷಿಣ ಅಂಟ್ಲಾಂಟಿಕ್ ಸಮುದ್ರದ ಜಾರ್ಜಿಯಾ ಐಲ್ಯಾಂಡ್‍ನತ್ತ ಪ್ರಯಾಣ ಬೆಳೆಸಿದೆ.
ಸಮುದ್ರ ನೀರಿನ ಹರಿವಿನ ವೇಗಕ್ಕೆ ವರ್ಷಗಳ ಕಾಲ ಸಂಚರಿಸಿದ ಎ68ಎ ಹೆಸರಿನ ಮಂಜುಗಡ್ಡೆ ಜಾರ್ಜಿಯಾಕ್ಕೆ ಹತ್ತಿರವಾಗುತ್ತಿರುವ ಬಗ್ಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಮಾಹಿತಿ ನೀಡಿದೆ. ಎ68ಎ ಮಂಜುಗಡ್ಡೆ ಈಗ ದಕ್ಷಿಣ ಅಟ್ಲಾಂಟಿಕ್ ಐಲ್ಯಾಂಡ್‍ಗೆ ಕೇವಲ 100 ಮೈಲು ದೂರದಲ್ಲಿದೆ. ಕೆಲವೇ ದಿನಗಳಲ್ಲಿ ಅಥವಾ ವಾರದೊಳಗೆ ಘರ್ಷಣೆ ಸಂಭವಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಬ್ರಿಟಿಷ್ ಸಾಗರೋತ್ತರ ಭೂಪ್ರದೇಶದಲ್ಲಿ ವಾಸಿಸುವ 1.3 ಮಿಲಿಯನ್ ಜೋಡಿ ಚಿನ್‍ಸ್ಟ್ರಾಪ್ ಪೆಂಗ್ವಿನ್‍ಗಳ ಅಳಿವಿನ ಆತಂಕ ಎದುರಾಗಿದೆ. ಅಷ್ಟಲ್ಲದೆ ಈ ಪ್ರದೇಶದಲ್ಲಿನ 5 ಮಿಲಿಯನ್ ಸೀಲ್‍ಗಳು ಹಾಗೂ 65 ಮಿಲಿಯನ್ ಸಂತಾನೋತ್ಪತ್ತಿ ಪಕ್ಷಿಗಳ ಉಳಿವಿನ ಪ್ರಶ್ನೆ ಎದುರಾಗಿದೆ.
ವಿಶ್ವದ ಅತಿದೊಡ್ಡ ಮಂಜುಗಡ್ಡೆ ಎ68 ಬಗ್ಗೆ ನಿಮಗೆಷ್ಟು ಗೊತ್ತು?
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು