ವಾಣಿಜ್ಯ ಜಾಹಿರಾತು

ಮಾನವಶಾಸ್ತ್ರಜ್ಞರ ಪ್ರಕಾರ ಮನುಷ್ಯ ಸುಮಾರು 40,000 ವರ್ಷಗಳಿಂದಲೇ ಪಾದರಕ್ಷೆಗಳನ್ನು ಬಳಸುವುದನ್ನು ಕಲಿತಿದ್ದ. ಆದರೆ ಆ ಹಳೆಯ ಪಾದರಕ್ಷೆಗಳು ಹೇಗಿದ್ದಿರಬಹುದು ಎನ್ನುವ ಕುತೂಹಲ ಮಾತ್ರ ಹಾಗೇ ಇತ್ತು. ಅರ್ಮೇನಿಯಾದ ಅರೆನಿ-1 ಎಂಬ ಗುಹೆಯಲ್ಲಿ 2008 ರಲ್ಲಿ ದೊರೆತ ಶೂ ಕುತೂಹಲಿಗಳ ಪಾಲಿಗೆ ಸಂತಸ ತಂದಿತ್ತು. ಇದುವರೆಗೂ ದೊರಕಿದ ಜಗತ್ತಿನ ಅತ್ಯಂತ ಹಳೆಯ ಶೂ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಇದು ಬರೋಬ್ಬರಿ 5,500 ವರ್ಷ ಹಳೆಯದಾಗಿದ್ದು,ಚರ್ಮದಿಂದ ಮಾಡಲ್ಪಟ್ಟಿದೆ.

ಅಂತರಾಷ್ಟ್ರೀಯ ಪುರಾತತ್ವಶಾಸ್ತ್ರಜ್ಞರ ತಂಡವೊಂದು ಅರೆನಿ-1 ಗುಹೆಯಲ್ಲಿ ಉತ್ಖನನ ಮಾಡುವ ಸಮಯದಲ್ಲಿ ಇದನ್ನು ಪತ್ತೆ ಹಚ್ಚಿತ್ತು. ಜತೆಗೆ ಮಡಿಕೆಯ ತುಂಡುಗಳು ಹಾಗೂ ಮೇಕೆಯೊಂದರ ಕೊಂಬು ಕೂಡಾ ಅಲ್ಲಿ ದೊರಕಿತ್ತು. ಶೀತಲ ಮತ್ತು ಒಣ ಪ್ರದೇಶದಲ್ಲಿ ಇದ್ದುದರಿಂದಾಗಿ ಈ ಶೂ ಇನ್ನೂ ಉತ್ತಮ ಸ್ಥಿತಿಯಲ್ಲೇ ಇದೆ. ಇದರ ಒಳಗೆ ಹುಲ್ಲುಗಳಿದ್ದು,  ಕಾರಣ ತಿಳಿದು ಬಂದಿಲ್ಲ.

ಈ ಶೂ ಗಂಡಸಿನದೋ ಅಥವಾ ಹೆಂಗಸಿನದೋ ಎನ್ನುವುದರ ಕುರಿತು ಗೊಂದಲವಿದ್ದರೂ, ಇದು ಅಂದಿನ ಕಾಲದ ಪುರುಷನದ್ದೇ ಆಗಿರಬಹುದು ಎನ್ನುವ ಅಭಿಪ್ರಾಯವಿದೆ. ಆಕ್ಸ್ ಫರ್ಡ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನಡೆಸಲಾದ ಎರಡೂ ಕಾರ್ಬನ್ ಡೇಟಿಂಗ್ ಪರೀಕ್ಷೆಗಳು ಇದರ ಕಾಲವನ್ನು ಕ್ರಿ.ಪೂ 3,500 ಕ್ಕೆ ನಿಗದಿಪಡಿಸಿವೆ. ಪ್ರಸ್ತುತ ಇದು ಯೆರೆವಾನ್ ನಗರದ ಹಿಸ್ಟರಿ ಮ್ಯೂಸಿಯಂ ಆಫ್ ಅರ್ಮೇನಿಯಾದಲ್ಲಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.